Friday 5 June 2015


ಮುನ್ನುಡಿ 

ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1973ನೇ ಇಸವಿಯಲ್ಲಿ ಆರಂಭಗೊಂಡು ಇದೀಗ 42 ವರ್ಷಗಳನ್ನು ಪೂರೈಸಿದೆ . ಅನೇಕ ಏಳುಬೀಳುಗಳ ನಡುವೆ ಈ ಶಾಲೆಯು  ಸಾವಿರಾರು ಪುಟಾಣಿಗಳಿಗೆ ವಿದ್ಯಾದಾನವನ್ನು ಮಾಡಿದೆ . ಕುಂಬಳೆ ಗ್ರಾಮ ಪಂಚಾಯತಿನ ಅತ್ಯಂತ ದೂರದ ವಾರ್ಡ್ ನಂಬ್ರ VII ರಲ್ಲಿ ಕಿದೂರು ಗ್ರಾಮದ ಹೃದಯಭಾಗದಲ್ಲಿ ಸ್ಥಾಪನೆಗೊಂಡಿದೆ . ಕಡುಬಡವರು,ಕೃಷಿ,ಕೂಲಿ,ಬೀಡಿ ಕಾರ್ಮಿಕರು ವಾಸಿಸುವ ಈ ಶಾಲಾ ಪರಿಸರದಲ್ಲಿ ಅವರ ಮಕ್ಕಳೇ ಈ ವಿದ್ಯಾಲಯದ ಸಂಪತ್ತು . ಈ ಶಾಲೆಗೆ ಉತ್ತಮವಾದ ತರಗತಿ ಕೋಣೆಗಳಿಲ್ಲದಿರುವುದು ಒಂದು ದೊಡ್ಡ ಕೊರತೆಯಾಗಿತ್ತು . ಆದರೆ 2014-15 ನೇ ಶೈಕ್ಷಣಿಕ ವರ್ಷದಲ್ಲಿ S.S.A ವತಿಯಿಂದ ನೀಡಲಾದ ಸುಂದರವಾದ ಒಂದು ತರಗತಿ ಕೋಣೆಯ ನಿರ್ಮಾಣವಾಗಿ ತಾರೀಕು 21-03-2015 ನೇ ಶನಿವಾರದಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷೆ ಶೀಮತಿ ತಾಹಿರಾ ಯೂಸಫ್ ಅವರಿಂದ ಉದ್ಘಾಟನೆಗೊಂಡಿತು . S.S.A ವತಿಯಿಂದ ಮಂಜೂರಾದ ಇನ್ನೊಂದು ತರಗತಿ ಕೋಣೆಯೂ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಲು ಹೆಮ್ಮೆ ಪಡುತಿದ್ದೇವೆ . 
                                   ಇತ್ತೀಚೆಗಿನ ದಿನಗಳಲ್ಲಿ ಅಧ್ಯಾಪಕರ,PTA,MPTA, ಊರ ವಿದ್ಯಾಭಿಮಾನಿಗಳ ಅವಿಶ್ರಾಂತ ದುಡಿಮೆಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ; ವಿವಿಧ ಚಟುವಟಿಕೆಗಳಲ್ಲಿ ಗುರುತಿಸಲ್ಪಟ್ಟ ವಿದ್ಯಾಲಯವಾಗಿದೆ ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ . ಜನವಿರಳವಾದ ಈ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆಯಾದಂತೆ ಮಕ್ಕಳ ಸಂಖ್ಯೆಯೂ ಕಡಿಮೆ . 

No comments:

Post a Comment