Friday 5 June 2015

ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಿದೂರು ಶಾಲೆಯಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.ವಿಶೇಷ ಅಸೆಂಬ್ಲಿಯಲ್ಲಿ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.SMC Chairman ಮಕ್ಕಳಿಗೆ ಸಸ್ಯಗಳನ್ನು ವಿತರಿಸಿದರು.

















ಕಿದೂರು GLP ಶಾಲೆಯಲ್ಲಿ ಪ್ರವೇಶೋತ್ಸವ ಮೆರವಣಿಗೆ ನಡೆಸಲಾಯಿತು.ಬಳಿಕ ನಡೆದ ಸಭೆಯನ್ನು ವಾರ್ಡ್ ಪ್ರತಿನಿಧಿ ಶೋಭಾವತಿ ಉದ್ಘಾಟಿಸಿದರು.ಅಲ್ಲದೆ ಕಲಿಕೋಪಕರಣ ಕಿಟ್ಟನ್ನು ವಿತರಿಸಿದರು.ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಮೌನೇಶ್ವರಿ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಹಿರಿಯ ಶಿಕ್ಷಕ ರಾಮು ಯು. ಸ್ವಾಗತಿಸಿದರು ಶಾಲಾ ಮುಖ್ಯಶಿಕ್ಷಕಿ ಸೌಮ್ಯಲತ,ಸಹ ಅಧ್ಯಾಪಕ ಮೊಹಮ್ಮದ್ ರಫೀಕ್ ಮಾತನಾಡಿದರು.ಜಯಶ್ರೀ ವಂದಿಸಿದರು ಶಾಲಾ ಸಿಬ್ಬಂದಿ ಗೀತಾ,ಶಾಲಾ ರಕ್ಷಕ-ಶಿಕ್ಷಕ ಸಂಘ MPTA ಸದಸ್ಯರು ಹಾಗು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಜರಿದ್ದರು. 


ಮುನ್ನುಡಿ 

ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1973ನೇ ಇಸವಿಯಲ್ಲಿ ಆರಂಭಗೊಂಡು ಇದೀಗ 42 ವರ್ಷಗಳನ್ನು ಪೂರೈಸಿದೆ . ಅನೇಕ ಏಳುಬೀಳುಗಳ ನಡುವೆ ಈ ಶಾಲೆಯು  ಸಾವಿರಾರು ಪುಟಾಣಿಗಳಿಗೆ ವಿದ್ಯಾದಾನವನ್ನು ಮಾಡಿದೆ . ಕುಂಬಳೆ ಗ್ರಾಮ ಪಂಚಾಯತಿನ ಅತ್ಯಂತ ದೂರದ ವಾರ್ಡ್ ನಂಬ್ರ VII ರಲ್ಲಿ ಕಿದೂರು ಗ್ರಾಮದ ಹೃದಯಭಾಗದಲ್ಲಿ ಸ್ಥಾಪನೆಗೊಂಡಿದೆ . ಕಡುಬಡವರು,ಕೃಷಿ,ಕೂಲಿ,ಬೀಡಿ ಕಾರ್ಮಿಕರು ವಾಸಿಸುವ ಈ ಶಾಲಾ ಪರಿಸರದಲ್ಲಿ ಅವರ ಮಕ್ಕಳೇ ಈ ವಿದ್ಯಾಲಯದ ಸಂಪತ್ತು . ಈ ಶಾಲೆಗೆ ಉತ್ತಮವಾದ ತರಗತಿ ಕೋಣೆಗಳಿಲ್ಲದಿರುವುದು ಒಂದು ದೊಡ್ಡ ಕೊರತೆಯಾಗಿತ್ತು . ಆದರೆ 2014-15 ನೇ ಶೈಕ್ಷಣಿಕ ವರ್ಷದಲ್ಲಿ S.S.A ವತಿಯಿಂದ ನೀಡಲಾದ ಸುಂದರವಾದ ಒಂದು ತರಗತಿ ಕೋಣೆಯ ನಿರ್ಮಾಣವಾಗಿ ತಾರೀಕು 21-03-2015 ನೇ ಶನಿವಾರದಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷೆ ಶೀಮತಿ ತಾಹಿರಾ ಯೂಸಫ್ ಅವರಿಂದ ಉದ್ಘಾಟನೆಗೊಂಡಿತು . S.S.A ವತಿಯಿಂದ ಮಂಜೂರಾದ ಇನ್ನೊಂದು ತರಗತಿ ಕೋಣೆಯೂ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಲು ಹೆಮ್ಮೆ ಪಡುತಿದ್ದೇವೆ . 
                                   ಇತ್ತೀಚೆಗಿನ ದಿನಗಳಲ್ಲಿ ಅಧ್ಯಾಪಕರ,PTA,MPTA, ಊರ ವಿದ್ಯಾಭಿಮಾನಿಗಳ ಅವಿಶ್ರಾಂತ ದುಡಿಮೆಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ; ವಿವಿಧ ಚಟುವಟಿಕೆಗಳಲ್ಲಿ ಗುರುತಿಸಲ್ಪಟ್ಟ ವಿದ್ಯಾಲಯವಾಗಿದೆ ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ . ಜನವಿರಳವಾದ ಈ ಪ್ರದೇಶದಲ್ಲಿ ಜನಸಂಖ್ಯೆ ಕಡಿಮೆಯಾದಂತೆ ಮಕ್ಕಳ ಸಂಖ್ಯೆಯೂ ಕಡಿಮೆ .