Friday 20 February 2015

4-2-2015 ರಂದು ನಡೆದ ಶಾಲಾ ಮಟ್ಟದ ಮೆಟ್ರಿಕ್ ಮೇಳವನ್ನು ಉದ್ಘಾಟಿಸಿದ  ಭಾರತಿ ಟೀಚರ್ ಗಣಿತ ನಮ್ಮ ಜೀವನದ  ಒಂದು ಭಾಗವೆಂದು ಅಭಿಪ್ರಾಯಪಟ್ಟರು.ಈ ಮೇಳದಲ್ಲಿ PTA ಅಧ್ಯಕ್ಷರು,ರಕ್ಷಕರು,ಮಕ್ಕಳು ಬಹಳ ಆಸಕ್ತಿಯಿಂದ ಭಾಗವಹಿಸಿದರು.ಕಾರ್ಯಕ್ರಮದ ಆರಂಬದಲ್ಲಿ ರಾಮು ಮಾಸ್ತರ ಸ್ವರಚಿತ ಮೇಳ ಗೀತೆಯನ್ನು ಹಾಡಿಸಲಾಯಿತು . 

  ಮೇಳ ಗೀತೆ 

 ಬನ್ನಿ ಗೆಳೆಯರೇ 
ಸಿಡಿಲ ಮರಿಗಳೇ 
ಗಣಿತ ಮೇಳ ಸೇರುವ 
ಕೂಡಿ ಲೆಕ್ಕ ಮಾಡುವ . 
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮುಂದೆ ನಡೆಯುವ. 
ಗೇಣಿಗೊಂದು ಗೇಣುಯಿಟ್ಟು 
ಎಣಿಸಿ ನೋಡುವ . 
ನಿಮಿಷ ನಿಮಿಷ ಒಟ್ಟು ಸೇರಿ 
ಗಂಟೆಯಾಯಿತು . 
ದಿನಕೆ ದಿನವು ಕಳೆದು 
ಮುಂದೆ ವರ್ಷವಾಯಿತು . 
ಚಮಚ ಗ್ಲಾಸಿನಲ್ಲಿ ನೀರ 
ಅಳೆದು ನೋಡುವ 
ಹನಿಯ ಗೂಡಿ ಹಳ್ಳವೆಂಬ 
ಗಾದೆ ತಿಳಿಯುವಾ. 
ಉದ್ದ ಮೂಗು ಕೈಯ್ಯ ಬೆರಳು 
ಅಳೆದು ನೋಡುವ . 
ಮೀಟರ್ ಕೋಲು ಇಂಚು ಎಂಬ 
ಅಳತೆ ತಿಳಿಯುವ. 
ಇಡ್ಲಿ ದೋಸೆ ಚಕ್ಕುಲಿಯೆಲ್ಲ
ಎಣಿಕೆಯಲ್ಲವೇ...?
ದಿನವು ತಿಂದು ಮುಗಿಯುವಂತಹ 
ಲೆಕ್ಕವಲ್ಲವೇ... ?
 ಗಣಿತವೆಂದು ಮುಗಿಯುವಂತಹ 
ಲೆಕ್ಕವಲ್ಲವೇ... ?
ಗಣಿತವೆಂದು ಕಷ್ಟವಲ್ಲ 
ನಮ್ಮ ಬಾಳಿಗೆ 
ಕೂಡಿ ಕಳೆದು ಉಳಿದವೆಲ್ಲ 
ನಮ್ಮ ನಾಡಿಗೆ .





4ನೇ ತರಗತಿ ದೃಶ್ಯ ಎಂಬ ಗಣಿತ ಪಾಠಭಾಗಕ್ಕೆ ಸಂಬಂಧಿಸಿ ಸ್ಥಳೀಯರಾದ ಮಾಧವ ಎಂಬವರು ಮಕ್ಕಳಿಗೆ ಬುಟ್ಟಿ ಹಣೆಯುವ ಪ್ರಾತ್ಯಕ್ಷಿಕೆಯನ್ನು ನೀಡಿದರು.




ದಿನಾಂಕ 6-2-2015 ನೇ ಶುಕ್ರವಾರ ನಡೆದ ಶಾಲಾ ನೂತನ ಕಟ್ಟಡದ Main slabನ ವಿವಿಧ ಹಂತಗಳು ಹಾಗು ಸಂಬಂಧಿಸಿ ಅಧಿಕಾರಿಗಳು ನಿರೀಕ್ಷಣೆ ಮಾರ್ಗದರ್ಶನ